ಹೊಸ ವರ‍್ಶ ಬರುತ್ತಿದ್ದ ಹಾಗೆ, ಈ "ನ್ಯೂ ಇಯರ್ ರಿಸೊಲ್ಯೂಶನ್ಸ್" ಗಳು ನಮ್ಮ ಬಗೆಯಲ್ಲಿ ಮೊಳಕೆ ಹೊಡೆಯುತ್ತವೆ, ಅಲ್ವೇ ? ಅದು ಮಾಡಬೇಕು, ಇದು ಮಾಡಬೇಕು ಎಂದು ಏನೇನೋ ಯೋಜನೆ ಹಾಕಿಕೊಳ್ಳುತ್ತೇವೆ. ಈ ವರ‍್ಶ ಮೊದಲುಗೊಂಡಾಗ, ಒಂದು ಹೊಸ ಮಿಂಬರಹವನ್ನು ಬರೆಯಲು ತೊಡಗಿಸಿಕೊಳ್ಳಬೇಕು ಎನ್ನುವ ಯೋಚನೆ ನನಗೂ ಇತ್ತು. ಆ ಚಿಂತನೆಯ ಹಣ್ಣೇ, ಈ ಮಿಂಬರಹ- "ಬಗೆಗೆ ಬಂದ ಅರಿವು". ಏನಾದರೂ ಹೊಸತನ್ನು ಬರೆಯಬೇಕು, ಹಂಚಿಕೊಳ್ಳಬೇಕು ಎನ್ನುವ ತುಡಿತವಿದ್ದಲ್ಲಿ, ಅದನ್ನು ಮುಂದೆ ಈ ಮಿಂಬರಹದಲ್ಲಿ ಮೂಡಿಸುತ್ತೇನೆ.