ಸ್ವಾಮಿ ವಿವೇಕಾನಂದರ ವಿಚಾರಗಳ ಕುರಿತ ಕೆಲವು ಅನಿಸಿಕೆಗಳು

ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಶ್ ಇಂಡಿಯಾ ನೆಲಸೆ ಮತ್ತು ಅಮೇರಿಕಾ ಒಕ್ಕೂಟದಲ್ಲಿ ತುಂಬ ಹೆಚ್ಚಿನ ಸಂಚಲನ ಮೂಡಿಸಿದ ಮೂಡಣದ ಆಳುಗಳಲ್ಲಿ ಒಬ್ಬರೆಂದರೆ ಸ್ವಾಮಿ ವಿವೇಕಾನಂದರು. ಆದ್ಯಾತ್ಮದ ಹೊಳಹುಗಳನ್ನು ಅಮೇರಿಕನ್ನರೆದುರು ಬಿಡಿಸಿಟ್ಟವರಲ್ಲಿ ಮೊದಲಿಗರು ಇವರು. ಹಲವಾರು ಶತಮಾನಗಳಿಂದ ಕನ್ನಡ, ತಮಿಳು, ತೆಲುಗು, ಬಂಗಾಲ ಮುಂತಾದ ಮೂಡಣದ ನಾಡುಗಳಲ್ಲಿ ಹುಟ್ಟಿ ಬೆಳೆದ ದಾರ್‍ಮಿಕ ಪರಿಸರವು ಪಡುವಣದವರ ಗಮನವನ್ನು ಹೆಚ್ಚಾಗಿ ಸೆಳೆಯಲು ಮೊದಲು ಮಾಡಿದ್ದು, ಬ್ರಿಟಿಶ್ ಇಂಡಿಯಾ ನೆಲಸೆ ಆಸ್ತಿತ್ವಕ್ಕೆ ಬಂದಾಗ. ಮ್ಯಾಕ್ಸ್ ಮುಲ್ಲರ್ ರಂತಹ ತಿಳಿವಿಗರು ಹಳೆಯ ಸಂಸ್ಕ್ರುತ ನಲ್ಬರಹವನ್ನು ಇಂಗ್ಲಿಶ್ …

ಸ್ವಾಮಿ ವಿವೇಕಾನಂದರ ವಿಚಾರಗಳ ಕುರಿತ ಕೆಲವು ಅನಿಸಿಕೆಗಳು ಓದಲು ಮುಂದುವರೆಸಿ

ಕನ್ನಡಿಗರ ಪೆಡಸುತನ ಮತ್ತು ನಾವು ಅದಕ್ಕೆ ತೆರಬೇಕಾಗಿರುವ ಬೆಲೆ

ಒಂದು ಕೂಡಣದಲ್ಲಿ ಬರವಣಿಗೆಯ ಹೊಳಹುಗಳಿಗೆ ಯಾರು ನಡೆತೋರುತ್ತಾರೆ ? ಆ ಪ್ರಶ್ನೆಯನ್ನಿಟ್ಟುಕೊಂಡು ಈ ಲೇಕನವನ್ನು ಬರೆಯಲು ಮೊದಲುಮಾಡುತ್ತಿದ್ದೇನೆ. ಇಂಗ್ಲಿಶ್ ಕೂಡಣದಲ್ಲಿ ಪದಕಟ್ಟಣೆ ಮತ್ತು ಅದರ ಬಳಕೆ ಹುಲುಮಂದಿಯ ಕಯ್ಯಲ್ಲೂ ಇದೆ ಮತ್ತು ಬರವಣಿಗೆಯ ಹರವಿನಲ್ಲಿ ದುಡಿಯುವವರ ಕಯ್ಯಲ್ಲೂ ಇದೆ. ಹಾಗಾಗಿ, ಕನ್ನಡ ಕೂಡಣದಲ್ಲಿ ಪಾಚಿಕಟ್ಟಿಕೊಂಡಿರುವ ಪೆಡಸುತನ ಅಲ್ಲಿಲ್ಲ ಮತ್ತು ಹೊತ್ತಿನಿಂದ ಹೊತ್ತಿಗೆ ಕೂಡಣದ ಬೇಕುಗಳಿಗೆ ತಕ್ಕಂತೆ ಬಾಶೆಯನ್ನು ಸವರಿ, ತಿದ್ದಿ, ಹೊಸದನ್ನು ಅಳವಡಿಸಿಕೊಂಡು ಮುಂದುವರಿಯುವ ಅಳವು ಅವರಿಗಿದೆ. ಈ ಕುರಿತ ಸೂಳ್ಮಾತಿಗೆ ನಾನು “ಸೆಲ್ಪ್ಹೀ” ಒರೆಯನ್ನು ಆಯ್ದುಕೊಳ್ಳುತ್ತೇನೆ. …

ಕನ್ನಡಿಗರ ಪೆಡಸುತನ ಮತ್ತು ನಾವು ಅದಕ್ಕೆ ತೆರಬೇಕಾಗಿರುವ ಬೆಲೆ ಓದಲು ಮುಂದುವರೆಸಿ

ಹೊಸ ಒರೆಗಳು ಮತ್ತು ಕನ್ನಡ ಕೂಡಣ

ಕೂಡಣಗಟ್ಟೆ, ಅದರಲ್ಲೂ ಟ್ವಿಟರಿನಲ್ಲಿ ನಾನು ಹೆಚ್ಚಾಗಿ ತೊಡಗಿಸಿಕೊಳ್ಳುತ್ತೇನೆ. ನನ್ನ ಜೊತೆಯ ಕನ್ನಡಿಗರ ತಿಳಿವು, ಹಿನ್ನುಣಿಕೆಗಳು ಟ್ವಿಟರಿನಲ್ಲಿ ನನಗೆ ಪ್ರತಿದಿನ ಸುಲಬವಾಗಿ ದೊರಕುತ್ತವೆ. ಟ್ವಿಟರಿನಲ್ಲಿ ಕನ್ನಡಿಗರೊಟ್ಟಿಗೆ ಸೂಳ್ಮಾತಶ್ಟೇ ಅಲ್ಲದೆ, ಲಿಪಿ ಸುದಾರಣೆಯ ಬೀಳುಗಳೆಯುವಿಕೆಯನ್ನು ಕೂಡಾ ನಾವು ಕಾಣುತ್ತೇವೆ. ಒಟ್ಟಾರೆಯಾಗಿ ಈ ದನಾತ್ಮಕ ಹಾಗೂ ರುಣಾತ್ಮಕ ಹಿನ್ನುಣಿಕೆಯನ್ನು ಬರಮಾಡಿಕೊಂಡು ಸೀಳಿನೋಡುವ ಮೊಗಸನ್ನು ಈ ಬರಹದಲ್ಲಿ ಮಾಡಿದ್ದೇನೆ. ಟ್ವಿಟರಿನಲ್ಲಿ ಒಬ್ಬ ಕನ್ನಡಿಗರು ನನಗೆ ಹಾಕಿದ ಕೇಳ್ವೆ ನನ್ನ ತಿಳಿವಿನ ಹರವನ್ನು ಹಿಗ್ಗಿಸಿತು. ಈಗ ಪದಕಟ್ಟುವಿಕೆ ಅಂತ ನಡೆಯುತ್ತಿದೆಯಲ್ಲ, ಅದು ಎಶ್ಟು ಒಳಿತು …

ಹೊಸ ಒರೆಗಳು ಮತ್ತು ಕನ್ನಡ ಕೂಡಣ ಓದಲು ಮುಂದುವರೆಸಿ

ಮಹಾಪ್ರಾಣಗಳನ್ನು ಬಿಟ್ಟು ಬರೆದರೆ ಅದು ಕನ್ನಡ ಪದವಾಗಿಬಿಡುತ್ತಾ ?

ಸೋಶಿಯಲ್ ಮೀಡಿಯಾದಲ್ಲಿ ನಾನು ಬರೆಯುವುದು  ಕನ್ನಡದ ಹೊಸ ಬರಹದಲ್ಲೇ. ನುಡಿಯರಿಮೆ ಹಾಗೂ ಸೊಲ್ಲರಿಮೆಯ ಬಗ್ಗೆ ನನಗೆ ಗೊತ್ತಿರುವ ತಿಳಿವನ್ನು ಹಂಚಿಕೊಂಡು ಕನ್ನಡಿಗರಲ್ಲಿ ಈ ಕುರಿತು ಜಾಗ್ರುತಿಯನ್ನು ಮೂಡಿಸುವುದು ನನ್ನ ನೆಚ್ಚಿನ ಹವ್ಯಾಸವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ನಾನು ಹಂಚಿಕೊಂಡ ತಿಳಿವಿಗೆ ಕನ್ನಡಿಗರ ಮಾರೆಸಕಗಳು ಬೇರೆ ಬೇರೆಯಾಗಿರುತ್ತವೆ. ಕೆಲವರು ನನ್ನ ಹೇಳಿಕೆಯನ್ನು ಒಪ್ಪಿಕೊಂಡರೆ, ಇನ್ನು ಕೆಲವರು ತಮ್ಮದೇ ಆದ ಅನುಮಾನಗಳನ್ನು ಹೊರಹಾಕುತ್ತಾರೆ. ಆ ಅನುಮಾನಗಳು ತಪ್ಪು ತಿಳುವಳಿಕೆಯಿಂದ ಬಂದಿರುವುದಾಗಿರುತ್ತವೆ. ಅವುಗಳಲ್ಲಿ ಒಂದನ್ನು ಈ ಲೇಕನದಲ್ಲಿ ಬಿಡಿಸಿಡಲು ಮೊಗಸಿದ್ದೇನೆ. “ಸಂಸ್ಕ್ರುತದ ಪದಗಳಲ್ಲಿರುವ …

ಮಹಾಪ್ರಾಣಗಳನ್ನು ಬಿಟ್ಟು ಬರೆದರೆ ಅದು ಕನ್ನಡ ಪದವಾಗಿಬಿಡುತ್ತಾ ? ಓದಲು ಮುಂದುವರೆಸಿ

ಜಾತಿಯ ಕುರಿತು ನನ್ನ ಕೆಲವು ಹೊಳಹುಗಳು

ಕೂಡಣದಲ್ಲಿ ನಾವು ಚಿಕ್ಕಂದಿನಿಂದಲೂ ಒಂದು ಗುರುತನ್ನು ನಮ್ಮದಾಗಿಸಿಕೊಂಡು ಬೆಳೆದಿರುತ್ತೇವೆ. ಅದು ಎಶ್ಟರಮಟ್ಟಿಗೆ ನಮ್ಮ ತನ್ಮೆಯಾಗಿರುತ್ತದೆ ಎಂಬ ಅರಿವು ನಮಗಿರಬಹುದು ಅತವಾ ಇಲ್ಲದೆಯೂ ಇರಬಹುದು. ಇಲ್ಲಿ ಕೂಡಣ ಎಂದು ಹೆಸರಿಸಿರುವುದನ್ನು ಬೇರೆ ಬೇರೆ ಇಂಬುಗಳನ್ನೂ ನಾವು ಪರಿಗಣನೆಗೆ ತೆಗೆದುಕೊಂಡಲ್ಲಿ, ಇಲ್ಲವೇ ಆ ಕೂಡಣದ ಹರವನ್ನು ಹಿಗ್ಗಿಸಿದ ದ್ರುಶ್ಟಿಕೋನದಲ್ಲಿ ನೋಡಿದಲ್ಲಿ ಆ ನಮ್ಮ ತನ್ಮೆ ಇನ್ನೂ ನಿಚ್ಚಳವಾಗಿ ಕಣ್ಣುಕುಕ್ಕುತ್ತದೆ. ಚಿಕ್ಕವನಿದ್ದಾಗ, "ನೀವು ಬ್ರಾಮಿನ್ಸಾ ? ", " ನಿಮ್ಮನ್ನು ನೋಡಿದರೆ ಮಂಗಳೂರು ಕಡೆ ಬ್ರಾಹ್ಮಣರ ತರ ಕಾಣಿಸ್ತೀರಿ " ಎಂದೆಲ್ಲಾ …

ಜಾತಿಯ ಕುರಿತು ನನ್ನ ಕೆಲವು ಹೊಳಹುಗಳು ಓದಲು ಮುಂದುವರೆಸಿ

ಹೆಸರಿನಲ್ಲೇನಿದೆ ? ಇದೆಲ್ಲವೂ ಇದೆ !…

ಕನ್ನಡ ಬರವಣಿಗೆಯಲ್ಲಿ ಸಂಸ್ಕ್ರುತದ ಪದಗಳನ್ನು ಬಳಸುವುದರ ಪರ ಮತ್ತು ವಿರೋದದ ಚರ್‍ಚೆ ಇಂದು ನಿನ್ನೆಯದಲ್ಲ. ಹಳೆಯ ನಲ್ಬರಹಗಳ ಬಗ್ಗೆ ಸಾಮಾನ್ಯ ತಿಳುವಳಿಕೆ ಇರುವ ಕನ್ನಡಿಗರಿಗೆಲ್ಲರಿಗೂ ಗೊತ್ತು, ಈ ವಿವಾದಕ್ಕೆ ಹಲವು ನೂರೇಡುಗಳ ಹಳಮೆ ಇದೆ ಎನ್ನುವುದು. ಸದ್ಯದ ಹೊತ್ತಿನಲ್ಲಿ ಈ ವಿವಾದ ಇನ್ನಶ್ಟು ಕಾವು ಪಡೆಯುತ್ತಿದ್ದು, ಕನ್ನಡದ್ದೇ ಆದ ಸೊಲ್ಲರಿಮೆಯ ಬಗ್ಗೆ ನುಡಿಯರಿಗರಾದ Dr. ಡಿ.ಎನ್. ಶಂಕರ ಬಟ್ಟರ ಅರಕೆಗಳು ಕನ್ನಡಪರ ನಿಲುವಿಗೆ ಹೆಚ್ಚು ಒತ್ತು ನೀಡುತ್ತಿರುವುದು ನಮಗೆ ತಿಳಿದಿದೆ. ಈ ನಿಟ್ಟಿನಲ್ಲಿ ಕನ್ನಡದೊಲವಿಗರು ಮತ್ತು ಸಂಸ್ಕ್ರುತದೊಲವಿಗರ …

ಹೆಸರಿನಲ್ಲೇನಿದೆ ? ಇದೆಲ್ಲವೂ ಇದೆ !… ಓದಲು ಮುಂದುವರೆಸಿ

ಶಬ್ದಮಣಿದರ್‍ಪಣದ ಸೀಳುನೋಟ – ೨

ಇದು ಶಬ್ದಮಣಿದರ್‍ಪಣದ ಕುರಿತಾಗಿ ಈ ಮಿಂಬರಹದಲ್ಲಿ ನನ್ನ ಎರಡನೆಯ ಬರಹ. ನಾನು ಶಬ್ದಮಣಿದರ್‍ಪಣವನ್ನು ಸೀಳಿನೋಡಲು ಯಾವುದೇ ಹೊಸದಾಗಿ ಕಂಡುಕೊಂಡ ಸೊಲ್ಲರಿಮೆಯ ಒಲವುಗಳನ್ನು ಬುಡವಾಗಿಟ್ಟುಕೊಂಡು ಬರೆಯುವುದಕ್ಕಿಂತ, ಬರೀ ನಮ್ಮೆಲ್ಲ ಸಾಮಾನ್ಯ ಕನ್ನಡಿಗರ ಬಗೆಗೆ ಎಟುಕುವ ಸಾಮಾನ್ಯ ತಿಳಿವನ್ನೇ ಇಲ್ಲಿ ಬುಡವಾಗಿಟ್ಟುಕೊಂಡಿದ್ದೇನೆ. ಇದರ ಹಿಂದೆ ಎರಡು ಕಾರಣಗಳಿವೆ- ೧. ಹೆಚ್ಚಿನ ಸೊಲ್ಲರಿಮೆ ಕಟ್ಟಲೆ ಅತವಾ ಒಲವುಗಳ ಗೊಡವೆ ಇಲ್ಲದೆ ತಿಳಿಯಾಗಿ ವಿಚಾರವನ್ನು ಓದುಗರಿಗೆ ತಿಳಿಸಬಹುದು ಎಂದು. ೨. ಸೊಲ್ಲರಿಮೆಯ, ಅದರಲ್ಲೂ ಹಳೆಯ ಹೊತ್ತಿನ ಕ್ರುತಿಗಳು ಎಂದರೆ ಏನೋ ತುಂಬ ಸಿಕ್ಕಲಾದ …

ಶಬ್ದಮಣಿದರ್‍ಪಣದ ಸೀಳುನೋಟ – ೨ ಓದಲು ಮುಂದುವರೆಸಿ

ಹಳೆಯದೆಂದ ಮಾತ್ರಕ್ಕೆ ಎಲ್ಲವೂ ಒಳಿತಲ್ಲ…

ಪಂಪನ “ವಿಕ್ರಮಾರ್‍ಜುನ ವಿಜಯ” ವನ್ನು ಓದುತ್ತಿರುವಾಗ ನಾಲ್ಕನೆಯ ತುಂಡು ’ಚತುರ್‍ತಾಶ್ವಾಸಂ’ ನ ಈ ಎರಡನೆಯ ಕಂದಪದ್ಯ ನನ್ನ ಗಮನಸೆಳೆಯಿತು. ಇಲ್ಲಿ ಬರಹದ ಶಯ್ಲಿಗೆ ತಕ್ಕನಾಗಿರುವಂತೆ ಹೊಂದಿಸಲು ’ ದೈವಬಲ ’ ಎಂಬುದನ್ನು ’ದೆಯ್ವಬಲ ’ ಎಂದೂ, ’ ದೈವಂ ’ ಎಂಬುದನ್ನು ’ ದೆಯ್ವಂ ’ ಎಂದೂ ಬಿಡಿಸಲಾಗಿದೆ ಎನ್ನುವುದನ್ನು ಗಮನಿಸಬಹುದು. ಆದರೆ ನಿಜಕ್ಕೂ ಸಂಸ್ಕ್ರುತದ ’ ऐ ’ ತೆರೆಯುಲಿಯನ್ನು ನಾವು ಯಾವ ರೀತಿಯಲ್ಲಿ ಬಳಸುತ್ತೇವೆ ಎಂಬುದು ಕೊಂಚ ಗೊಂದಲಕ್ಕೆಡೆ ಮಾಡುತ್ತದೆ. ಈ ಸಂಸ್ಕ್ರುತದ ತೆರೆಯುಲಿಯನ್ನು …

ಹಳೆಯದೆಂದ ಮಾತ್ರಕ್ಕೆ ಎಲ್ಲವೂ ಒಳಿತಲ್ಲ… ಓದಲು ಮುಂದುವರೆಸಿ

ಹಿಗ್ಗಲಿ ನಮ್ಮ ಕಲ್ಪನೆಯ ಹರವು…

ಕನ್ನಡ ಲಿಪಿಯ ಬೆಳವಣಿಗೆಯಲ್ಲಿ ಸಂಸ್ಕ್ರುತದ ಪಾತ್ರ ಅಲ್ಲಗಳೆಯಲು ಸಾದ್ಯವಿಲ್ಲದಂತಹದ್ದು. ಏಕೆಂದರೆ, ಇದುವರೆಗೂ ನಾವು ಕನ್ನಡದ ಪೊಳಲಿಕೆಯಲ್ಲಿ ಅರಿತಿರುವ ಕನ್ನಡ ಬರವಣಿಗೆ – ಅದು ಕಲ್ಬರಹಗಳಲ್ಲಾಗಿರಬಹುದು, ತಾಳೆಗರಿಯಲ್ಲಿ ಬರೆದ ನಲ್ಬರಹಗಳಾಗಿರಬಹುದು, ಅತವಾ ಕನ್ನಡ ಅರಸರು ಟಂಕಿಸಿದ ದುಡ್ಡುಗಟ್ಟಿಗಳಾಗಿರಬಹುದು - ಇಲ್ಲೆಲ್ಲಾ ನಮಗೆ ಕಾಣುವ ಕನ್ನಡ ಬರವಣಿಗೆಯನ್ನು ಮೊದಲು ಬಳಕೆಗೆ ತಂದದ್ದು ಚೆನ್ನಾಗಿ ಸಂಸ್ಕ್ರುತದ ಅರಿವಿದ್ದವರೇ ಆಗಿದ್ದಾರೆ. ಕನ್ನಡ ಬರವಣಿಗೆಯಲ್ಲಿ ನಮ್ಮ ಹಳಬರು ಬಳಸಿದ, ಮತ್ತು ನಾವೀಗ ಬಳಸುತ್ತಿರುವ ಬರಿಗೆಗಳಿಗೆ ಸಂಸ್ಕ್ರುತದ ಬರಿಗೆಗಳೇ ಬೇರು. ಸಂಸ್ಕ್ರುತದ ನೆರವನ್ನು ಕನ್ನಡ ಹೀಗೆಲ್ಲಾ …

ಹಿಗ್ಗಲಿ ನಮ್ಮ ಕಲ್ಪನೆಯ ಹರವು… ಓದಲು ಮುಂದುವರೆಸಿ

ಶಬ್ದಮಣಿದರ‍್ಪಣದ ಸೀಳುನೋಟ – ೧

ಕೇಶಿರಾಜನ " ಶಬ್ದಮಣಿದರ‍್ಪಣ " ಕನ್ನಡದ ಸೊಲ್ಲರಿಮೆಯ ಕ್ರುತಿಗಳಲ್ಲಿ ತುಂಬ ಮುಕ್ಯವಾದುದೆಂದು ಪರಿಗಣಿಸಲ್ಪಟ್ಟಿದೆ. ಸುಮಾರು ೧೩ನೆಯ ನೂರೇಡಿನಲ್ಲಿ ಈ ಸೊಲ್ಲರಿಮೆಯನ್ನು ಬರೆಯಲಾಗಿದೆಯೆಂದು ಹಳಮೆಯರಿಗರ ಎಣಿಕೆ. ಶಬ್ದಮಣಿದರ‍್ಪಣವನ್ನು ಸೀಳಿನೋಡಿ, ಅರಿಯಲು ನನ್ನದೇ ಬಗೆಯಲ್ಲಿ ಒಂದು ಮೊಗಸನ್ನು ಇಲ್ಲಿ ಮಾಡಿದ್ದೇನೆ. ಮೊದಲನೆಯದಾಗಿ ಈ ಕ್ರುತಿಯ " ಸಂದಿ ಪ್ರಕರಣ " ತುಂಡಿನಲ್ಲಿ ೩೮ನೆಯ ಕುರಳಿನ ವಿಶ್ಲೇಶಣೆ ಇಲ್ಲಿದೆ. ಸಂದಿ ಪ್ರಕರಣ - ೩೮ ಬೆರಲ್, ಒರಲ್, ಎರಲ್, ಕೊರಲ್, ಸರಲ್, ಅರಲ್, ಪರಲ್, ಮರಲ್, ನರಲ್ ಮತ್ತು ಮುಂಗಯ್ ಸರಲ್ …

ಶಬ್ದಮಣಿದರ‍್ಪಣದ ಸೀಳುನೋಟ – ೧ ಓದಲು ಮುಂದುವರೆಸಿ